ಚಂದನ ಭಟ್. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಣೆಮನೆಯವನು. ಧಾರವಾಡದಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ. ಅನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜು, ಬಸವನಗುಡಿಯಲ್ಲಿ ಐದಾರು ತಿಂಗಳು ಮಣ್ಣು ಹೊತ್ತು, ಪೇಟೆ ಸುತ್ತಿ ಬಿಟ್ಟು ಬಂದಿಳಿದಿದ್ದು ಉಜಿರೆಯ ಎಸ್ ಡಿ ಎಂ ಕಾಲೇಜಿಗೆ. ಇದೀಗ ಬಿಬಿಎ ಪದವೀಧರ. ಬಹಳಷ್ಟು ಪರೀಕ್ಷೆಗಳಲ್ಲಿ ಮೂರಕ್ಷರವೂ ಓದದೇ ಒಳ್ಳೆಯ ಅಂಕಗಳೊಂದಿಗೆ ಪಾಸಾದದ್ದು ಇದುವರೆಗಿನ ಸಾಧನೆ. ಸುಮ್ಮನಿದ್ದು ಬೇಸರ ಬಂದರೆ ಕೆಲವೊಮ್ಮೆ ಮಾತನಾಡುತ್ತೇನೆ. ಐಸ್ ಕ್ರೀಮ್ ಎಂದರೆ ಜೀವ. ಅದಕ್ಕೆ ಮಳೆಗಾಲ ಚಳಿಗಾಲದ ಹಂಗಿಲ್ಲ. ಮಂದಾರ ಪತ್ರಿಕೆಯ ಸಂಪಾದಕ ಹಾಗೂ ವಿನ್ಯಾಸಗಾರ. ಮಂದಾರ ನನಗೆ ಹೆಮ್ಮೆ ಎನಿಸಿದ, ಖುಷಿ ಕೊಟ್ಟ ಕೆಲಸಗಳಲ್ಲಿ ಒಂದು. ಓದು, ಬರಹ, ಫೋಟೋಗ್ರಾಫಿ, ಕೃಷಿ, ವಿನ್ಯಾಸ, ಸ್ಟಾಕ್ ಮಾರ್ಕೇಟ್, ಚಿತ್ರಕಲೆ ನಂಗಿಷ್ಟ. ಖಾಲಿ ಕೂರುವುದು ಹಾಗೂ ಸದಾ ಏನನ್ನಾದರೂ ಹೊಸತನ್ನು ಮಾಡ್ತಾ ಇರುವುದರ ನಡುವಿನ ಬಾಲೆನ್ಸೇ ನನ್ನ ಬದುಕು.
Chandan Bhat. Born in a small village of Yellapur, Uttara Kannada. Done PUC (Science PCMB) in Dharwad. Went for BA in National College Basavanagudi, Bengaluru and dicontinued after five six months. BBA graduate from SDM College Ujire. Passing in all the exams without studying is my biggest achievement till now. I talk when I get bored of being silent. You can kidnap me easily by offering icecream. People wonder looking at me when I eat icecream in rainy seasons also. Editor and Designer of Mandara Magazine. A dream child. Which gave lot of satisfaction and experience in life. I love reading, Writing, Photography, Investments, Stock Market, Painting. Always finding balance between being lazy and most productive person. and welcome to my world :)